ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld ಎಂದು search ಮಾಡಿ

SATS

SATS-STUDENT ACHIEVEMENT TRACKING SYSTEM

ಬುಧವಾರ, ಸೆಪ್ಟೆಂಬರ್ 22, 2021

Class / 6th / ಸಮಾಜ ಪಾಠ ೨ ನಮ್ಮ ಕರ್ನಾಟಕ

 

6ನೇ ತರಗತಿ


ಪಾಠ2.  ನಮ್ಮ ಕರ್ನಾಟಕ. 

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1) ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಆಳಿದ 3 ರಾಜ ಮನೆತನಗಳು ಯಾವವು? 

ಉತ್ತರ: ಗಂಗರು, ಚೋಳರು, ಹೊಯ್ಸಳರು.


2) ಬೆಂಗಳೂರು ವಿಭಾಗದಲ್ಲಿ ಎಷ್ಟು ಜಿಲ್ಲೆಗಳಿವೆ? 
ಉತ್ತರ: 9.


3) ಬೆಂಗಳೂರು ವಿಭಾಗವನ್ನು ಆಳಿದ 2 ಪಾಳೆ ಪಟುಗಳ ಹೆಸರನ್ನು ಬರೆಯಿರಿ. 

ಉತ್ತರ: ಕೆಳದಿ, ಚಿತ್ರದುರ್ಗ. 

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1) ಪ್ರಕೃತಿಕ ಸಂಪನ್ಮೂಲ ಎಂದರೇನು? ಉದಾಹರಣೆ ನೀಡಿ. 

ಉತ್ತರ: ಪ್ರಕೃತಿದತ್ತವಾದ ಸಂಗತಿಗಳನ್ನು ಪ್ರಕೃತಿಕ ಸಂಪನ್ಮೂಲ ಎಂದು ಕರೆಯುತ್ತೇವೆ. ಉದಾ: ನದಿ, ಕಾಡು, ಕಣಿವೆ, ಜಲಪಾತಗಳು, ಕನಿಜ ಗಣಿಗಳು, ವನ್ಯಮೃಗಗಳು, ಮಣ್ಣು ಇತ್ಯಾದಿ.

2) ಬೆಂಗಳೂರು ವಿಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆ ಯಾವುದು? 

ಉತ್ತರ: ಶಿವಮೊಗ್ಗ ಜಿಲ್ಲೆ.

3) ಬೆಂಗಳೂರು ವಿಭಾಗದಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗಲು ಕಾರಣಗಳೇನು? 

ಉತ್ತರ: ಬೆಂಗಳೂರು ನಗರ ಜಿಲ್ಲೆಯ ಅನೇಕ ನದಿಗಳು ನಾಶದ ಅಂಚನ್ನು ತಲುಪಿವೆ. ಅನೇಕ ಕೆರೆಗಳು ಭೂ ಆಕ್ರಮಣದಿಂದ ನಾಶವಾಗುತ್ತಿವೆ. ಇದರಿಂದಾಗಿ ನೀರಿನ ತೀವ್ರ  ಭಾವ ಆಗುತ್ತಿದೆ.

4) ಬೆಂಗಳೂರು ವಿಭಾಗದ 2 ಜಲಪಾತಗಳ ಹೆಸರನ್ನು ಬರೆಯಿರಿ. 

ಉತ್ತರ: ಜೋಗ ಜಲಪಾತ, ಮುತ್ಯಾಲಮಡು ಜಲಾಶಯ. 

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ? 

ಉತ್ತರ: ಬೆಂಗಳೂರು ಜಿಲ್ಲೆ.

2) ಬೆಂಗಳೂರು ವಿಭಾಗದಲ್ಲಿರುವ ಅತಿ ಎತ್ತರದ ಗುಡ್ಡದ ಹೆಸರನ್ನು ಬರೆಯಿರಿ. 

ಉತ್ತರ: ಹಾಲು ರಾಮೇಶ್ವರ ಗುಡ್ಡ.

3) ಬೆಂಗಳೂರು ವಿಭಾಗದಲ್ಲಿರುವ 2 ಪಕ್ಷಿಧಾಮಗಳ ಹೆಸರನ್ನು ತಿಳಿಸಿ. ಉತ್ತರ: ಗುಡವಿ ಪಕ್ಷಿಧಾಮ- ಶಿವಮೊಗ್ಗ ಜಿಲ್ಲೆ. ಮಂಡಗದ್ದೆ ಪಕ್ಷಿಧಾಮ- ಶಿವಮೊಗ್ಗ ಜಿಲ್ಲೆ.

4) ರಾಮನಗರ ಜಿಲ್ಲೆಯಲ್ಲಿರುವ ಪಕ್ಷಿಧಾಮದಲ್ಲಿ ಯಾವ ಪಕ್ಷಿಯನ್ನು ರಕ್ಷಿಸಲಾಗುತ್ತಿದೆ?

 ಉತ್ತರ: ರಣಹದ್ದು.

****************************
ತರಗತಿ 6. ಸಮಾಜ ವಿಜ್ಞಾನ. 

ಪಾಠ 2. ನಮ್ಮ ಕರ್ನಾಟಕ. 

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ 

1) ಬೆಂಗಳೂರು ವಿಭಾಗದಲ್ಲಿನ ಪ್ರಮುಖ ಆಹಾರ ಬೆಳೆಗಳು ಯಾವುದು? 

ಉತ್ತರ: ರಾಗಿ, ಮೆಕ್ಕೆಜೋಳ, ಭತ್ತ, ಕಡಲೆಕಾಯಿ, ಬೆಳೆಕಾಳು ಮುಂತಾದವು.

2) ಹಿಪ್ಪುನೇರಳೆ ಎಲೆಯು ಯಾವ ಉದ್ದಿಮೆಗೆ ಕಚ್ಚಾ ಸಾಮಾಗ್ರಿಯಾಗಿದೆ? 

ಉತ್ತರ: ರೇಷ್ಮೆ.

3) ಭದ್ರಾವತಿಯಲ್ಲಿರುವ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯನ್ನು ಯಾವ ವರ್ಷ ಆರಂಭಿಸಲಾಯಿತು? 

ಉತ್ತರ: 1923.

4) ಬೆಂಗಳೂರು ವಿಭಾಗದಲ್ಲಿ ಯಾವ ಸ್ಥಳಗಳಲ್ಲಿ ಸಿದ್ಧ ಉಡುಪು ಪಾರ್ಕುಗಳನ್ನು ಸ್ಥಾಪಿಸಲಾಗಿದೆ? 

ಉತ್ತರ: ದೊಡ್ಡಬಳ್ಳಾಪುರ, ಆನೇಕಲ್. 

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1) ಜ್ಞಾನಪೀಠ ಪ್ರಶಸ್ತಿ ಪಡೆದ ಬೆಂಗಳೂರು ವಿಭಾಗಕ್ಕೆ ಸೇರಿದ ಮೂವರು ಸಾಹಿತಿಗಳ ಹೆಸರುಗಳನ್ನು ಬರೆಯಿರಿ. 

ಉತ್ತರ: ರಾಷ್ಟ್ರಕವಿ ಕುವೆಂಪು, ಮಾಸ್ತಿ ವೆಂಕಟೇಶ್ ಐಯಂಗಾರ್ ಮತ್ತು ಡಾ. ಯು. ಆರ್. ಅನಂತಮೂರ್ತಿ.

2) ಪ್ರಸಿದ್ಧ ಜಾನಪದ ಮ್ಯೂಸಿಯಂ ಜಾನಪದ ಲೋಕವನ್ನು ಸ್ಥಾಪಿಸಿದವರು? 

ಉತ್ತರ: ಎಚ್. ಎಲ್. ನಾಗೇಗೌಡ.

3) ಬೆಂಗಳೂರು ನಗರದಲ್ಲಿ ಪ್ರತಿವರ್ಷ ನಡೆಯುವ ಪ್ರಸಿದ್ಧ ಉಸ್ತವ ಯಾವುದು? 

ಉತ್ತರ: ಕರಗ ಉಸ್ತವ.. 

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1) ಶಿವಮೊಗ್ಗ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿದ್ದ ರೋಗದ ಹೆಸರೇನು? 

ಉತ್ತರ: ಮಂಗನ ಕಾಯಿಲೆ.

2) ಭಾರತರತ್ನ ಪ್ರಶಸ್ತಿ ಪಡೆದ ಬೆಂಗಳೂರು ವಿಭಾಗದ ಇಬ್ಬರ ಹೆಸರನ್ನು ಬರೆಯಿರಿ. 

ಉತ್ತರ: ಸರ್. ಎಂ. ವಿಶ್ವೇಶ್ವರಯ್ಯ ಮತ್ತು ಸಿ. ವಿ. ಆರ್. ರಾವ್.

3) ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರ ಸ್ಥಾಪಿಸುವ ಆಸ್ಪತ್ರೆ ಕೇಂದ್ರಗಳನ್ನು ಏನೆಂದು ಕರೆಯಲಾಗುತ್ತದೆ? 

ಉತ್ತರ: ಪ್ರಾಥಮಿಕ ಆರೋಗ್ಯ ಕೇಂದ್ರ. 

ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1) ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯ ಹೆಸರನ್ನು ಬರೆಯಿರಿ. 

ಉತ್ತರ: ಕೆ. ಸಿ. ರೆಡ್ಡಿ.

2) ಇಬ್ಬರು ಕರ್ನಾಟಕ ಏಕೀಕರಣದ ರೂವಾರಿಗಳ ಹೆಸರನ್ನು ಬರೆಯಿರಿ. 

ಉತ್ತರ: ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ. 

ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ.

1) ಬೆಂಗಳೂರು ವಿಭಾಗದಲ್ಲಿ ಎಷ್ಟು ಜಿಲ್ಲೆಗಳಿವೆ? ಉತ್ತರ: 9   

2) ದಕ್ಷಿಣ ಭಾರತದ ಅತಿ ದೊಡ್ಡ ಕೆರೆ ಶಾಂತಿ ಸಾಗರ ಯಾವ ಜಿಲ್ಲೆಯಲ್ಲಿದೆ? 

ಉತ್ತರ: ದಾವಣಗೆರೆ ಜಿಲ್ಲೆ.

3) ಬೆಂಗಳೂರು ವಿಭಾಗದಲ್ಲಿ ಅತಿ ಹೆಚ್ಚು ಕಾಡು ಇರುವ ಜಿಲ್ಲೆ ಯಾವುದು? 

ಉತ್ತರ: ಶಿವಮೊಗ್ಗ ಜಿಲ್ಲೆ.

4) ರಾಷ್ಟ್ರಕವಿ ಕುವೆಂಪು ಹೆಸರಿನ ವಿಶ್ವವಿದ್ಯಾಲಯ ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿದೆ? 

ಉತ್ತರ: ಶಿವಮೊಗ್ಗ.



Class / 6th / social science / ಅಧ್ಯಾಯ / ಪಾಠ 1


ಪಾಠ1. ಇತಿಹಾಸ ಪರಿಚಯ. 


ಪ್ರಶ್ನೋತ್ತರಗಳು


ಅ )ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿ.


1) ಇತಿಹಾಸದ ಪಿತಾಮಹ----- 

ಉತ್ತರ: ಹೇರೋಡೋಟಸ್


2) ದಿ ಏಷ್ಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದವರು------ 

ಉತ್ತರ: ವಿಲಿಯಂ ಜೋನ್ಸ್ 


ಆ ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.


1) ಇತಿಹಾಸ ಎಂದರೇನು? 

ಉತ್ತರ: ಈ ಹಿಂದೆ ನಡೆದು ಹೋದ ಸಂಗತಿಗಳನ್ನು ಕ್ರಮಬದ್ಧವಾಗಿ ಹೇಳುವುದೇ ಇತಿಹಾಸ.


2) ಆಧಾರವಿಲ್ಲದೆ ಇತಿಹಾಸವಿಲ್ಲ ಏಕೆ? 

ಉತ್ತರ: ಇತಿಹಾಸವನ್ನು ನಿರ್ದಿಷ್ಟವಾಗಿ ಮತ್ತು ಖಚಿತವಾಗಿ  ಹೇಳಲು ಸಾಕ್ಷಾಧಾರಗಳನ್ನು ಬಳಸುತ್ತಾರೆ ಆದ್ದರಿಂದ ಆಧಾರವಿಲ್ಲದೆ ಇತಿಹಾಸವಿಲ್ಲ ಎಂದು ಹೇಳಲಾಗುವುದು.


3) ಇತಿಹಾಸದ ಆಧಾರಗಳನ್ನು ಪಟ್ಟಿ ಮಾಡಿ. 

ಉತ್ತರ: 


4) ಪುರಾತತ್ವ ಆಧಾರ ಎಂದರೇನು? 

ಉತ್ತರ: ಹಿಂದಿನ ಮಾನವರು ನಿರ್ಮಿಸಿದ ಮತ್ತು ಬಳಸಿದ ಭೌತಿಕ ವಸ್ತುಗಳ ಅವಶೇಷಗಳು ಪುರಾತತ್ವ ಆಧಾರಗಳು.


5) ಭಾರತೀಯ ಶಾಸ್ತ್ರವನ್ನು ಕುರಿತು ಅಧ್ಯಯನ ನಡೆಸಿದ ಇತಿಹಾಸಕಾರರನ್ನು ಹೆಸರಿಸಿ. 

ಉತ್ತರ: ಸರ್ ವಿಲಿಯಂ ಜೋನ್, ಮ್ಯಾಕ್ಸ್ ಮುಲ್ಲರ್. 


ಇ ) ಗುಂಪಿನಲ್ಲಿ ಚರ್ಚಿಸಿ ಉತ್ತರಿಸಿ.


1) ಅಭೆ ಡುಬಾಯ್ಸ ಕುರಿತು ಟಿಪ್ಪಣಿ ಬರೆಯಿರಿ. 

ಉತ್ತರ: ಅಭೆ ಡುಬಾಯ್ಸ್ ಎಂಬ ಫ್ರೆಂಚ್ ಮಿಷನರಿ ಶ್ರೀರಂಗಪಟ್ಟಣ ಬಳಿಯ ಗಂಜಾಂ ಗೆ ಬಂದು ನೆಲೆಸಿದರು ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಸನ್ಯಾಸಿಯಂತೆ ಬದುಕಿನ ಇವರನ್ನು ಜನರು ದೊಡ್ಡ ಸ್ವಾಮಿಯವರು ಎಂದು ಕರೆಯುತ್ತಿದ್ದರು. ಇವರು ಹಿಂದೂ ಮ್ಯಾನರ್ಸ್ ಕಸ್ಟಮ್ ಅಂಡ್ ಸೆರೆಮನಿ ಸ ಎಂಬ ಕೃತಿಯನ್ನು ಬರೆದರು. ಇದರಲ್ಲಿ ಭಾರತೀಯರ ಆಚಾರ, ವಿಚಾರ, ಹಬ್ಬ ಹರಿದಿನ, ವರ್ಣಾಶ್ರಮ ವ್ಯವಸ್ಥೆ ಮೊದಲಾದವುಗಳನ್ನು ಕುರಿತು ಬರೆದಿದ್ದಾರೆ. 


ಕೆಳಗಿನ ಎ ಪಟ್ಟಿ ಮತ್ತು ಬಿ ಪಟ್ಟಿಯಲ್ಲಿನ ವಿಷಯಗಳನ್ನು ಹೊಂದಿಸಿ ಬರೆಯಿರಿ.


1) ಕಾಳಿದಾಸ- ಶಾಕುಂತಲ


2) ಮ್ಯಾಕ್ಸ್ ಮುಲ್ಲರ್- ಸೇಕ್ರೆಡ್ ಬುಕ್ ಆಫ್ ದಿ ಇಷ್ಟ್


3) ಜೇಮ್ಸ್ ಮಿಲ್- ಹಿಸ್ಟರಿ ಆಫ್ ಇಂಡಿಯಾ


4) ವಿಲಿಯಂ ಜೋನ್ಸ್- ದಿ ಏಷ್ಯಾಟಿಕ್ ಸೊಸೈಟಿ.

ಸೋಮವಾರ, ಸೆಪ್ಟೆಂಬರ್ 20, 2021

6th - ವಿಜ್ಞಾನ - ಅಧ್ಯಾಯ ೩ - ಎಳೆಯಿಂದ ಬಟ್ಟೆ - ಪ್ರಶ್ನೋತ್ತರಗಳು| vktworld


ಅಧ್ಯಾಯ 3 ಎಳೆಯಿಂದ ಬಟ್ಟೆ 

   ~~~ :   ಅಭ್ಯಾಸಗಳು :~~~~~ 


1. ಕೆಳಗಿನ ನಾರುಗಳನ್ನು ನೈಸರ್ಗಿಕ ಅಥವಾ ಸಂಶ್ಲೇಷಿತ ಎಂಬುದಾಗಿ ವರ್ಗೀಕರಿಸಿ .

( ನೈಲಾನ್, ಉಣ್ಣೆ, ಹತ್ತಿ ,ರೇಷ್ಮೆ ಪಾಲಿಯೆಸ್ಟರ್, ಸೆಣಬು )

ಉತ್ತರ :- 

ನೈಸರ್ಗಿಕ ನಾರು - ಉಣ್ಣೆ, ಹತ್ತಿ, ರೇಷ್ಮೆ, ಸೆಣಬು

ಸಂಶ್ಲೇಷಿತ ನಾರು - ನೈಲಾನ್ , ಪಾಲಿಯೆಸ್ಟರ್‌


2 . ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ಎಂಬುದನ್ನು ತಿಳಿಸಿ 

ಎ) ನೂಲನ್ನು ನಾರಿನಿಂದ ತಯಾರಿಸಲಾಗುತ್ತದೆ 

=> ಸರಿ

ಬಿ ) ನೂಲುವುದು ನಾರುಗಳನ್ನು ಮಾಡುವ ಕ್ರಿಯೆ 

=> ತಪ್ಪು

ಸಿ ) ಸೆಣಬು ತೆಂಗಿನಕಾಯಿಯ ಹೊರಕವಚ 

=> ತಪ್ಪು

ಡಿ ) ಹತ್ತಿಯಿಂದ ಬೀಜ ಬೇರ್ಪಡಿಸುವ ಕ್ರಿಯೆಯನ್ನು ಹಿಂಜುವುದು ಎನ್ನುವರು 

=> ಸರಿ

ಇ ) ನೂಲನ್ನು ಮೇಯುವುದರಿಂದ ಬಟ್ಟೆ ತಯಾರಾಗುತ್ತದೆ 

=> ಸರಿ

ಎಫ್ ) ಗಿಡದ ಕಾಂಡದಿಂದ ರೇಷ್ಮೆ ನಾರನ್ನು ಪಡೆಯಲಾಗುತ್ತದೆ 

=> ತಪ್ಪು

ಜಿ) ಪಾಲಿಯೆಸ್ಟರ್ ಒಂದು ನೈಸರ್ಗಿಕ ನಾರು 

= ತಪ್ಪು


3 . ಬಿಟ್ಟ ಸ್ಥಳಗಳನ್ನು ತುಂಬಿ 


ಎ) ಸಸ್ಯದ ನಾರುಗಳನ್ನು ____ ಮತ್ತು _______ ಗಳಿಂದ ಪಡೆಯಲಾಗುತ್ತದೆ.

=> ಸೆಣಬು , ಹತ್ತಿ



ಬಿ) ಪ್ರಾಣಿಯ ನಾರುಗಳು_____ ಮತ್ತು _____


=> ರೇಷ್ಮೆ ಮತ್ತು ಉಣ್ಣೆ


4 ) ಸಸ್ಯದ ಯಾವ ಭಾಗಗಳಿಂದ ಹತ್ತಿ ಮತ್ತು ಸೆಣಬು ಗಳನ್ನು ಪಡೆಯಲಾಗುತ್ತದೆ ?

ಉತ್ತರ :- ಸೆಣಬು - ಕಾಂಡ

ಹತ್ತಿ - ಹಣ್ಣು


5 ) ತೆಂಗಿನ ನಾರಿನಿಂದ ತಯಾರಾಗುವ ಎರಡು ವಸ್ತುಗಳನ್ನು ಹೆಸರಿಸಿ .

ಉತ್ತರ - ಚಾಪೆ  , ಗೊಂಬೆ

ನಾರಿನಿಂದ ನೂಲನ್ನು ತಯಾರಿಸುವ ಕ್ರಿಯೆಯನ್ನು ವಿವರಿಸಿ 


ಹೆಚ್ಚುವರಿ ಪ್ರಶ್ನೆಗಳು 


೧) ನೇಯುವುದು ಎಂದರೇನು ?

ಉತ್ತರ :- ಎರಡು ಗುಂಪುಗಳನ್ನು ಗಳನ್ನು ಒಟ್ಟಿಗೆ ಜೋಡಿಸಿ ಬಟ್ಟೆ ತಯಾರಿಸುವ ಕ್ರಿಯೆಯನ್ನು ನೇಯುವುದು ಎನ್ನುವರು 


೨) ಹಿಂಜುವುದು ಎಂದರೇನು ?

ಉತ್ತರ :- ಸಾಮಾನ್ಯವಾಗಿ ಒಡೆದ ಹತ್ತಿ ಕಾಯಿಗಳಿಂದ ಹತ್ತಿಯನ್ನು ಕೈಯಿಂದ ತೆಗೆಯುತ್ತಾರೆ. ಬೀಜಗಳಿಂದ ನಾರನ್ನು ಬಾಚಿ ಪ್ರತ್ಯೇಕಿಸುತ್ತದೆ ಈ ಕ್ರಿಯೆಗೆ ಹಿಂಜುವುದು ಎನ್ನುವರು 


೩) ನೈಸರ್ಗಿಕ ನಾರುಗಳು ಎಂದರೇನು ?

ಉತ್ತರ :- ಕೆಲವು ಬಟ್ಟೆಗಳ ಆದ ಹತ್ತಿ ಸೆಣಬು ರೇಷ್ಮೆ ಮತ್ತು ಉಣ್ಣೆಗಳ ನಾರುಗಳನ್ನು ಸಸ್ಯ ಮತ್ತು ಪ್ರಾಣಿಗಳಿಂದ ಪಡೆಯುತ್ತೇವೆ ಇವುಗಳನ್ನು ನೈಸರ್ಗಿಕ ನಾರುಗಳು ಎಂದು ಕರೆಯುವರು 


೪) ಸಂಶ್ಲೇಷಿತ ನಾರುಗಳು ಎಂದರೇನು ?

ಉತ್ತರ :- ಸಸ್ಯ ಮತ್ತು ಪ್ರಾಣಿ ಮೂಲಗಳಿಂದ ಕೃತಕವಾಗಿ ರಾಸಾಯನಿಕ ವಸ್ತುಗಳನ್ನು ತಯಾರಿಸಲಾಗುತ್ತದೆ ಇವುಗಳನ್ನು ಸಂಸ್ಥೆಗಳು ಎನ್ನುವರು 

ಉದಾಹರಣೆಗೆ ಮತ್ತು ಆಕ್ರಿಲಿಕ್ 


೫ ) ನೂಲುವುದು  ಎಂದರೇನು ?

ಉತ್ತರ :- ನಾರುಗಳಿಂದ ನೂಲನ್ನು  ತಯಾರಿಸುವ ಕ್ರಿಯೆಯನ್ನು ನೂಲುವುದು ಎನ್ನುವರು 


೬) ನೂಲಿನಿಂದ ಬಟ್ಟೆ ಯನ್ನು ತಯಾರಿಸುವ ಪ್ರಮುಖ ವಿಧಾನಗಳು ಯಾವುವು ?

ಉತ್ತರ :- ನೇಯುವುದು ಮತ್ತು ಹೆಣೆಯುವುದು

(Cpo45) 7th - ಸಮಾಜ - ಪಾಠ ೧ - ವಿಜಯನಗರದ ಅರಸು ಮನೆತನಗಳು - ಪ್ರಶ್ನೋತ್ತರಗಳು

b> ಪಾಠ ೧ ವಿಜಯನಗರದ ಅರಸು ಮನೆತನಗಳು. 

ಅಭ್ಯಾಸಗಳು

| ) ಖಾಲಿ ಬಿಟ್ಟ ಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿ.

1) ಶ್ರೀಲಂಕಾದ ರಾಜರನ್ನು ಸೋಲಿಸಿ ಕಪ್ಪಕಾಣಿಕೆ ಪಡೆದ ಎರಡನೆಯ ದೇವರಾಯನ ಸೇನಾನಿ 

=> ಲಕ್ಕಣ್ಣ ದಂಡೇಶ

2) ಕೃಷ್ಣದೇವರಾಯನ ಗಜಪತಿ ಪ್ರತಾಪ ರುದ್ರನ ಮಗಳಾದಅನ್ನು ಮದುವೆಯಾದನು. 

ಉತ್ತರ: ಜಗನ್ಮೋಹಿನಿ

3) ವಿಜಯನಗರ ಸಾಮ್ರಾಜ್ಯದಲ್ಲಿ ವರಹ ನಾಣ್ಯ ವಾಗಿತ್ತು. 

ಉತ್ತರ: ಚಿನ್ನ.

4) ಎಲ್ಲಾ ಧರ್ಮೀಯರು ವಿಜಯನಗರ ಸಾಮ್ರಾಜ್ಯದಲ್ಲಿ ನಿಶ್ಚಿಂತೆಯಿಂದ ಜಿ ವಿಸ ಬಹುದಾಗಿತ್ತು ಎಂದು ಹೇಳಿದ ಪ್ರವಾಸಿಗ. 

ಉತ್ತರ: ಬರ್ಬೊಸ.

5) ವಿಜಯನಗರ ವಾಸ್ತುಶೈಲಿಯ ದ್ರಾವಿಡ ಶೈಲಿಯ ಶ್ರೇಷ್ಠ ವಿಕಾಸಿತ ಸ್ವರೂಪವೆಂದು ಹೇಳಿದ ಕಲಾ ಇತಿಹಾಸಕಾರ. 

ಉತ್ತರ: ಪರ್ಸಿ ಬ್ರೌನ್. 

|| ) ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1) ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಯಾರು? 

ಉತ್ತರ: ಹರಿಹರ ,  ಬುಕ್ಕರಾಯ , ಕಂಪಣ , ಮಾರಪ್ಪ , ಮುದ್ದಪ್ಪ

2) ವಿಜಯನಗರ ಸಾಮ್ರಾಜ್ಯವನ್ನಾಳಿದ ಅಂಶಗಳಾವುವು? 

ಉತ್ತರ: ಸಂಗಮ ವಂಶ, ಸಾಳುವ ವಂಶ, ತುಳುವ ವಂಶ, ಅರವೀಡು ವಂಶ. 

3) ಸಂಗಮ ವಂಶದ ಪ್ರಖ್ಯಾತ ದೊರೆ ಯಾರು? <

ಉತ್ತರ: ಎರಡನೆಯ ದೇವರಾಯ 

4) ವಿಜಯನಗರ ಸಾಮ್ರಾಜ್ಯದ ಅರಸರಲ್ಲಿ ಅತ್ಯಂತ ಶ್ರೇಷ್ಠ ದೊರೆ ಯಾರು? 

ಉತ್ತರ: ಕೃಷ್ಣದೇವರಾಯ 

5) ರಕ್ಕಸ ತಂಗಡಿ ಕದನ ಯಾವಾಗ ನಡೆಯಿತು? 

ಉತ್ತರ: ಸಾ. ಶ 1565 ಜನವರಿ 23.

6) ವಿಜಯನಗರ ಸಾಮ್ರಾಜ್ಯದ ರಾಜ್ಯ ದಾಯದ ಮೂಲಗಳಾವುವು? 

ಉತ್ತರ: ವಾಣಿಜ್ಯ ತೆರಿಗೆ, ವೃತ್ತಿ ತೆರಿಗೆ, ಬಾರಿಸುವುದು, ಸಂತೆ ಸುಂಕ, ರಫ್ತು ತೆರಿಗೆ, ಕಪ್ಪು ಕಾಣಿಕೆಗಳು.

7) ವಿಜಯನಗರ ಸಾಮ್ರಾಜ್ಯದಲ್ಲಿ ಆಚರಿಸುತ್ತಿದ್ದ ಹಬ್ಬ ಗಳಾವುವು? 

ಉತ್ತರ: ದಸರಾ ದೀಪಾವಳಿ.

8) ವಿಜಯನಗರ ಸಾಮ್ರಾಜ್ಯದಲ್ಲಿ ಬೆಳೆಯುತ್ತಿದ್ದ ಪ್ರಮುಖ ಬೆಳೆಗಳಾವವು? 

ಉತ್ತರ: ಅಕ್ಕಿ, ಜೋಳ, ಕಬ್ಬು ಮತ್ತು ಹತ್ತಿ.

9) ಕೃಷ್ಣದೇವರಾಯನ ಕೃತಿಗಳನ್ನು ತಿಳಿಸಿ. 

ಉತ್ತರ: ಜಾಂಬವತಿ ಕಲ್ಯಾಣ, ಮದಲಸ ಚರಿತಮ್, ರಸಮಂಜರಿ, ಅಮುಕ್ತ ಮೌಲ್ಯದ.

10) ವಿಜಯನಗರಕ್ಕೆ ಬೇಟಿ ನೀಡಿದ ವಿದೇಶಿ ಪ್ರವಾಸಿಗರನ್ನು ಹೆಸರಿಸಿ. 

ಉತ್ತರ: ಬಾರ್ಬಸ್, ಪರ್ಸಿಬ್ರೌನ್.

11) ವಿಜಯನಗರ ಕಾಲದ ಪ್ರಮುಖ ದೇವಾಲಯಗಳ ವುವು? 

ಉತ್ತರ: ವಿರೂಪಾಕ್ಷ ದೇವಾಲಯದ ಕಲ್ಯಾಣ ಮಂಟಪ, ಹಜಾರ ರಾಮಸ್ವಾಮಿ ದೇವಾಲಯ, ವಿಠಲ ಸ್ವಾಮಿ ದೇವಾಲಯ, ಕೃಷ್ಣಸ್ವಾಮಿ ದೇವಾಲಯ ಕಮಲ್ ಮಹಲ್. 

||| )ಈ ಕೆಳಕಂಡ ಪ್ರಶ್ನೆಗಳಿಗೆ ಗುಂಪಿನಲ್ಲಿ ಚರ್ಚಿಸಿ ಉತ್ತರಿಸಿ.

1) ಕೃಷ್ಣದೇವರಾಯನ ದಿಗ್ವಿಜಯಗಳನ್ನು ಕುರಿತು ಬರೆಯಿರಿ 

ಉತ್ತರ: ಗಂಗಾ ರಾಜನಿಂದ ಶಿವನಸಮುದ್ರ ಕೋಟೆಯನ್ನು ವಶಪಡಿಸಿಕೊಂಡನು. ನಂತರ ರಾಯಚೂರು ಕೋಟೆಯನ್ನು ಗೆದ್ದನು. ಬಿಜಾಪುರದ ಸುಲ್ತಾನನಿಂದ ಗೋವೆಯನ್ನು ವಶಪಡಿಸಿಕೊಳ್ಳುವಲ್ಲಿ ಪೋರ್ಚುಗೀಸರಿಗೆ ಸಹಾಯ ಮಾಡಿದನು. ಗಜಪತಿ ಪ್ರತಾಪರುದ್ರ ನನ್ನು ಸೋಲಿಸಿ ರಾಜಧಾನಿ ಕಟಕ್ ಅನ್ನು ವಶಪಡಿಸಿಕೊಂಡನು.

2) ವಿಜಯನಗರ ಕಾಲದ ಸಾಹಿತ್ಯ ಕೃತಿಗಳನ್ನು ಪಟ್ಟಿಮಾಡಿ. 

ಉತ್ತರ: ವಿದ್ಯಾರಣ್ಯರು- ಶಂಕರ ವಿಜಯ ಮತ್ತು ಸರ್ವದರ್ಶನ ಸಂಗ್ರಹ, ಸಾಯಣಾಚಾರ್ಯರು- ವೇದಾರ್ಥ ಪ್ರಕಾಶ ಮತ್ತು ಆಯುರ್ವೇದ ಸುಧಾನಿಧಿ, ಗಂಗಾ ದೇವಿಯು- ಮಧುರ ವಿಜಯ0, ಪ್ರೌಢದೇವರಾಯ- ಸುಧಾನಿಧಿ. ಕೃಷ್ಣದೇವರಾಯ ಜಾಂಬವತಿ ಕಲ್ಯಾಣ. 

|V ) ಈ ಕೆಳಗಿನ ಎ ಪಟ್ಟಿಗೆ ಸಂಬಂಧಿಸಿದ ಬಿ ಪಟ್ಟಿಯಲ್ಲಿನ ವಿಷಯಗಳನ್ನು ಹೊಂದಿಸಿ ಬರೆಯಿರಿ.

1) ಗಂಗಾದೇವಿ- ಮಧುರ ವಿಜಯ0 

2) ಎರಡನೆಯ ದೇವರಾಯ- ಗಜ ಬೇ0ಟೆಗಾರ 

3) ಕೃಷ್ಣದೇವರಾಯ- ಆಂಧ್ರ ಭೋಜ 

4) ಶೃಂಗೇರಿ- ವಿದ್ಯಾಶಂಕರ ದೇವಾಲಯ.


<

ಶುಕ್ರವಾರ, ಸೆಪ್ಟೆಂಬರ್ 17, 2021

(Cpo44) 6 th ವಿಜ್ಞಾನ - ಅಧ್ಯಾಯ 2 - ಆಹಾರದ ಘಟಕಗಳು - ಅಭ್ಯಾಸದ ಪ್ರಶ್ನೋತ್ತರಗಳು

 2 ಆಹಾರದ ಘಟಕಗಳು 

~~~ : ಅಭ್ಯಾಸಗಳು : ~~~~~


೧. ಒಂದು ನಮ್ಮ ಆಹಾರದಲ್ಲಿರುವ ಪ್ರಮುಖ ಪೋಷಕಾಂಶಗಳನ್ನು ಹೆಸರಿಸಿ 


ಉತ್ತರ :-  ನಮ್ಮ ಆಹಾರದಲ್ಲಿರುವ ಪೋಷಕಾಂಶಗಳು ಎಂದರೆ ಕಾರ್ಬೋಹೈಡ್ರೇಟ್ಗಳು , ಪ್ರೋಟೀನ್ಗಳು ಇವುಗಳ ಜತೆಗೆ ನೀರು ಮತ್ತು ನಾರು ಪದಾರ್ಥಗಳನ್ನು ಆಹಾರ ಒಳಗೊಂಡಿರುತ್ತದೆ.


೨ .  ಕೆಳಗಿನವುಗಳನ್ನು ಹೆಸರಿಸಿ.


ಎ ) ನಮ್ಮ ದೇಹಕ್ಕೆ ಮುಖ್ಯವಾಗಿ ಶಕ್ತಿಯನ್ನು ಕೊಡುವ ಪೋಷಕಗಳು 

      ಉತ್ತರ :- ಕಾರ್ಬೋಹೈಡ್ರೇಟ್ ಗಳು ಮತ್ತು ಕೊಬ್ಬು


ಬಿ ) ನಮ್ಮ ದೇಹದ ಬೆಳವಣಿಗೆ ಮತ್ತು ನಿರ್ವಹಣೆಗೆ ಅವಶ್ಯವಿರುವ ಪೋಷಕಗಳು 

       ಉತ್ತರ :- ಪ್ರೋಟೀನ್ ಗಳು ಮತ್ತು ಖನಿಜಗಳು


ಸಿ ) ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ವಿಟಮಿನ್ 

      ಉತ್ತರ :- ವಿಟಮಿನ್‌ ಎ


ಡಿ ) ನಮ್ಮ ಮೂಳೆಗಳನ್ನು ಆರೋಗ್ಯವಾಗಿಡಲು ಅಗತ್ಯವಿರುವ ಖನಿಜ 

ಉತ್ತರ :- ಕ್ಯಾಲ್ಸಿಯಂ



೩ . ಕೆಳಗಿನ ಆಹಾರ ಗಣಕಗಳು ಸಮೃದ್ಧಿಯಾಗಿರುವ ಎರಡೆರಡು ಆಹಾರ ಪದಾರ್ಥಗಳನ್ನು ಹೆಸರಿಸಿ. 


ಎ ) ಕೊಬ್ಬು 

      ಉತ್ತರ :- ಮಾಂಸ , ಮೊಟ್ಟೆ , ಶೇಂಗಾ , ಗೋಡಂಬಿ


ಬಿ ) ಪಿಸ್ಟ

ಉತ್ತರ :- ಗೋಧಿ , ಜೋಳ , ಮಾವು , ಕಬ್ಬು


ಸಿ ) ಆಹಾರದ ನಾರು ಪದಾರ್ಥ 

ಉತ್ತರ :- ತಾಜಾ ಹಣ್ಣುಗಳು , ತರಕಾರಿಗಳು


ಡಿ ) ಪ್ರೊಟೀನ್ 

        ಉತ್ತರ :- ಕಾಳುಗಳು ( ಹೆಸರು, ತೊಗರಿ, ಕಡ್ಲಿ, ಬಟಾಣೆ, ಸೋಯಾಬೀನ್ಸ್ ) , ಮಾಂಸ , ಮೊಟ್ಟೆ , ಮೀನು


೪ . ಸರಿಯಾದ ಹೇಳಿಕೆಗಳಿಗೆ (√ ) ಸರಿ ಗುರುತು ಮಾಡಿ 


ಎ) ಅನ್ನವನ್ನು ಮಾತ್ರ ಸೇವಿಸುವುದರ ಮೂಲಕ ನಾವು ನಮ್ಮ ದೇಹದ ಪೋಷಕಗಳ ಅಗತ್ಯತೆಯನ್ನು ಪೂರೈಸಬಹುದು ( × )


ಬಿ ) ಸಂತುಲಿತ ಆಹಾರವನ್ನು ಸೇವಿಸುವ ಮೂಲಕ ರೋಗಗಳನ್ನು ತಡೆಗಟ್ಟಬಹುದು ( √ )


ಸಿ ) ಸಂತುಲಿತ ಆಹಾರವು ವಿವಿಧ ಆಹಾರ ಪದಾರ್ಥಗಳನ್ನು ಒಳಗೊಂಡಿರಬೇಕು ( √ )


ಡಿ ) ದೇಹಕ್ಕೆ ಎಲ್ಲಾ ಪೋಷಕಗಳನ್ನು ಒದಗಿಸಲು ಮಾಂಸ ಮಾತ್ರ ಸಾಕು ( × )


೫ . ಖಾಲಿ ಜಾಗಗಳನ್ನು ಭರ್ತಿ ಮಾಡಿ 


ಎ ) ವಿಟಮಿನ್-ಡಿ ಕೊರತೆಯಿಂದ __________ ರೋಗ ಉಂಟಾಗುತ್ತದೆ

ಉತ್ತರ :- ರಿಕೆಟ್ಸ್ 


ಬಿ )  ಬೇರಿಬೇರಿ ರೋಗವು ____________ ಕೊರತೆಯಿಂದ ಉಂಟಾಗುತ್ತದೆ

ಉತ್ತರ :- ವಿಟಮಿನ್ ಬಿ1


ಸಿ )  ವಿಟಮಿನ್-ಸಿ ಕೊರತೆಯು____________ ರೋಗವನ್ನು ಉಂಟುಮಾಡುತ್ತದೆ.

ಉತ್ತರ :- ಸ್ಕರ್ವಿ


ಡಿ )  ನಮ್ಮ ಆಹಾರದಲ್ಲಿ_____________ ನ ಕೊರತೆಯಿಂದ ಇರುಳು ಕುರುಡುತನ ಉಂಟಾಗುತ್ತದೆ.

ಉತ್ತರ :- ವಿಟಮಿನ್ ಎ

ಶನಿವಾರ, ಸೆಪ್ಟೆಂಬರ್ 11, 2021

Class / 6th / science ವಿಜ್ಞಾನ - ಅಧ್ಯಾಯ ೧ ಆಹಾರ - ಇದು ಎಲ್ಲಿಂದ ದೊರಕುತ್ತದೆ ? - ಪ್ರಶ್ನೋತ್ತರಗಳು

 ಆಹಾರ - ಇದು ಎಲ್ಲಿಂದ ದೊರಕುತ್ತದೆ? 


 ~~~ : ಅಭ್ಯಾಸಗಳು :~~~


 ಪ್ರಶ್ನೆ1) ಎಲ್ಲಾ ಜೀವಿಗಳಿಗೂ ಒಂದೇ ತರಹದ ಆಹಾರ ಅವಶ್ಯ ಎಂದು ನೀನು ತಿಳಿದಿರುವಿರಾ ?

ಉತ್ತರ :-  ಇಲ್ಲ.  ಎಲ್ಲಾ ಜೀವಿಗಳಿಗೂ ಒಂದೇ ತರಹದ ಆಹಾರ ಅವಶ್ಯವಿರುವುದಿಲ್ಲ.  ಜೀವಿಗಳು ತಿನ್ನುವ ಆಹಾರ ಪದಾರ್ಥಗಳಲ್ಲಿ ಬಹಳಷ್ಟು ವೈವಿಧ್ಯತೆ ಇದೆ ಎಂಬುದನ್ನು ನಾವು ನೋಡಬಹುದು.


ಪ್ರಶ್ನೆ ೨)  :- ನಾವು ತಿನ್ನುವ ಐದು ಸಸ್ಯಗಳು ಮತ್ತು ತಿನ್ನುವ ಅವುಗಳ ಭಾಗಗಳನ್ನು ಹೆಸರಿಸಿ 

ಉತ್ತರ :- <

    (೧) ಬದನೆಕಾಯಿ ಗಿಡ - ಬದನೆಕಾಯಿ (ಕಾಯಿ)

     (೨) ಬಾಳೆ ಹಣ್ಣಿನ ಗಿಡ -  ಬಾಳೆಹಣ್ಣು (ಹಣ್ಣು )

     (೩) ಸೇಬಿನ ಮರ - ಸೇಬು ಹಣ್ಣು (ಕಾಯಿ & ಹಣ್ಣು )

     (೪) ಪಾಲಕ್ ಸಸ್ಯ - ಪಾಲಕ್ ಎಲೆ ( ಎಲೆ )

     (೫) ಶೇಂಗಾ ಗಿಡ. -  ಶೇಂಗಾ ಬೀಜ (ಬೀಜ )


ಪ್ರಶ್ನೆ ೩ :- ಕಾಲಂ - ಎ ನಲ್ಲಿ  ಕೊಟ್ಟಿರುವ ಅಂಶಗಳನ್ನು ಕಾಲಂ - ಬಿ ಅಂಶಗಳೊಂದಿಗೆ ಹೊಂದಿಸಿ