QUIZES

SATS

SATS-STUDENT ACHIEVEMENT TRACKING SYSTEM

ಬುಧವಾರ, ಸೆಪ್ಟೆಂಬರ್ 22, 2021

Class / 6th / social science / ಅಧ್ಯಾಯ / ಪಾಠ 1


ಪಾಠ1. ಇತಿಹಾಸ ಪರಿಚಯ. 


ಪ್ರಶ್ನೋತ್ತರಗಳು


ಅ )ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿ.


1) ಇತಿಹಾಸದ ಪಿತಾಮಹ----- 

ಉತ್ತರ: ಹೇರೋಡೋಟಸ್


2) ದಿ ಏಷ್ಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದವರು------ 

ಉತ್ತರ: ವಿಲಿಯಂ ಜೋನ್ಸ್ 


ಆ ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.


1) ಇತಿಹಾಸ ಎಂದರೇನು? 

ಉತ್ತರ: ಈ ಹಿಂದೆ ನಡೆದು ಹೋದ ಸಂಗತಿಗಳನ್ನು ಕ್ರಮಬದ್ಧವಾಗಿ ಹೇಳುವುದೇ ಇತಿಹಾಸ.


2) ಆಧಾರವಿಲ್ಲದೆ ಇತಿಹಾಸವಿಲ್ಲ ಏಕೆ? 

ಉತ್ತರ: ಇತಿಹಾಸವನ್ನು ನಿರ್ದಿಷ್ಟವಾಗಿ ಮತ್ತು ಖಚಿತವಾಗಿ  ಹೇಳಲು ಸಾಕ್ಷಾಧಾರಗಳನ್ನು ಬಳಸುತ್ತಾರೆ ಆದ್ದರಿಂದ ಆಧಾರವಿಲ್ಲದೆ ಇತಿಹಾಸವಿಲ್ಲ ಎಂದು ಹೇಳಲಾಗುವುದು.


3) ಇತಿಹಾಸದ ಆಧಾರಗಳನ್ನು ಪಟ್ಟಿ ಮಾಡಿ. 

ಉತ್ತರ: 


4) ಪುರಾತತ್ವ ಆಧಾರ ಎಂದರೇನು? 

ಉತ್ತರ: ಹಿಂದಿನ ಮಾನವರು ನಿರ್ಮಿಸಿದ ಮತ್ತು ಬಳಸಿದ ಭೌತಿಕ ವಸ್ತುಗಳ ಅವಶೇಷಗಳು ಪುರಾತತ್ವ ಆಧಾರಗಳು.


5) ಭಾರತೀಯ ಶಾಸ್ತ್ರವನ್ನು ಕುರಿತು ಅಧ್ಯಯನ ನಡೆಸಿದ ಇತಿಹಾಸಕಾರರನ್ನು ಹೆಸರಿಸಿ. 

ಉತ್ತರ: ಸರ್ ವಿಲಿಯಂ ಜೋನ್, ಮ್ಯಾಕ್ಸ್ ಮುಲ್ಲರ್. 


ಇ ) ಗುಂಪಿನಲ್ಲಿ ಚರ್ಚಿಸಿ ಉತ್ತರಿಸಿ.


1) ಅಭೆ ಡುಬಾಯ್ಸ ಕುರಿತು ಟಿಪ್ಪಣಿ ಬರೆಯಿರಿ. 

ಉತ್ತರ: ಅಭೆ ಡುಬಾಯ್ಸ್ ಎಂಬ ಫ್ರೆಂಚ್ ಮಿಷನರಿ ಶ್ರೀರಂಗಪಟ್ಟಣ ಬಳಿಯ ಗಂಜಾಂ ಗೆ ಬಂದು ನೆಲೆಸಿದರು ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಸನ್ಯಾಸಿಯಂತೆ ಬದುಕಿನ ಇವರನ್ನು ಜನರು ದೊಡ್ಡ ಸ್ವಾಮಿಯವರು ಎಂದು ಕರೆಯುತ್ತಿದ್ದರು. ಇವರು ಹಿಂದೂ ಮ್ಯಾನರ್ಸ್ ಕಸ್ಟಮ್ ಅಂಡ್ ಸೆರೆಮನಿ ಸ ಎಂಬ ಕೃತಿಯನ್ನು ಬರೆದರು. ಇದರಲ್ಲಿ ಭಾರತೀಯರ ಆಚಾರ, ವಿಚಾರ, ಹಬ್ಬ ಹರಿದಿನ, ವರ್ಣಾಶ್ರಮ ವ್ಯವಸ್ಥೆ ಮೊದಲಾದವುಗಳನ್ನು ಕುರಿತು ಬರೆದಿದ್ದಾರೆ. 


ಕೆಳಗಿನ ಎ ಪಟ್ಟಿ ಮತ್ತು ಬಿ ಪಟ್ಟಿಯಲ್ಲಿನ ವಿಷಯಗಳನ್ನು ಹೊಂದಿಸಿ ಬರೆಯಿರಿ.


1) ಕಾಳಿದಾಸ- ಶಾಕುಂತಲ


2) ಮ್ಯಾಕ್ಸ್ ಮುಲ್ಲರ್- ಸೇಕ್ರೆಡ್ ಬುಕ್ ಆಫ್ ದಿ ಇಷ್ಟ್


3) ಜೇಮ್ಸ್ ಮಿಲ್- ಹಿಸ್ಟರಿ ಆಫ್ ಇಂಡಿಯಾ


4) ವಿಲಿಯಂ ಜೋನ್ಸ್- ದಿ ಏಷ್ಯಾಟಿಕ್ ಸೊಸೈಟಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು

Random Posts

Random Posts