QUIZES

SATS

SATS-STUDENT ACHIEVEMENT TRACKING SYSTEM

ಬುಧವಾರ, ಸೆಪ್ಟೆಂಬರ್ 22, 2021

Class / 6th / ಸಮಾಜ ಪಾಠ ೨ ನಮ್ಮ ಕರ್ನಾಟಕ

 

6ನೇ ತರಗತಿ


ಪಾಠ2.  ನಮ್ಮ ಕರ್ನಾಟಕ. 

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1) ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಆಳಿದ 3 ರಾಜ ಮನೆತನಗಳು ಯಾವವು? 

ಉತ್ತರ: ಗಂಗರು, ಚೋಳರು, ಹೊಯ್ಸಳರು.


2) ಬೆಂಗಳೂರು ವಿಭಾಗದಲ್ಲಿ ಎಷ್ಟು ಜಿಲ್ಲೆಗಳಿವೆ? 
ಉತ್ತರ: 9.


3) ಬೆಂಗಳೂರು ವಿಭಾಗವನ್ನು ಆಳಿದ 2 ಪಾಳೆ ಪಟುಗಳ ಹೆಸರನ್ನು ಬರೆಯಿರಿ. 

ಉತ್ತರ: ಕೆಳದಿ, ಚಿತ್ರದುರ್ಗ. 

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1) ಪ್ರಕೃತಿಕ ಸಂಪನ್ಮೂಲ ಎಂದರೇನು? ಉದಾಹರಣೆ ನೀಡಿ. 

ಉತ್ತರ: ಪ್ರಕೃತಿದತ್ತವಾದ ಸಂಗತಿಗಳನ್ನು ಪ್ರಕೃತಿಕ ಸಂಪನ್ಮೂಲ ಎಂದು ಕರೆಯುತ್ತೇವೆ. ಉದಾ: ನದಿ, ಕಾಡು, ಕಣಿವೆ, ಜಲಪಾತಗಳು, ಕನಿಜ ಗಣಿಗಳು, ವನ್ಯಮೃಗಗಳು, ಮಣ್ಣು ಇತ್ಯಾದಿ.

2) ಬೆಂಗಳೂರು ವಿಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆ ಯಾವುದು? 

ಉತ್ತರ: ಶಿವಮೊಗ್ಗ ಜಿಲ್ಲೆ.

3) ಬೆಂಗಳೂರು ವಿಭಾಗದಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗಲು ಕಾರಣಗಳೇನು? 

ಉತ್ತರ: ಬೆಂಗಳೂರು ನಗರ ಜಿಲ್ಲೆಯ ಅನೇಕ ನದಿಗಳು ನಾಶದ ಅಂಚನ್ನು ತಲುಪಿವೆ. ಅನೇಕ ಕೆರೆಗಳು ಭೂ ಆಕ್ರಮಣದಿಂದ ನಾಶವಾಗುತ್ತಿವೆ. ಇದರಿಂದಾಗಿ ನೀರಿನ ತೀವ್ರ  ಭಾವ ಆಗುತ್ತಿದೆ.

4) ಬೆಂಗಳೂರು ವಿಭಾಗದ 2 ಜಲಪಾತಗಳ ಹೆಸರನ್ನು ಬರೆಯಿರಿ. 

ಉತ್ತರ: ಜೋಗ ಜಲಪಾತ, ಮುತ್ಯಾಲಮಡು ಜಲಾಶಯ. 

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ? 

ಉತ್ತರ: ಬೆಂಗಳೂರು ಜಿಲ್ಲೆ.

2) ಬೆಂಗಳೂರು ವಿಭಾಗದಲ್ಲಿರುವ ಅತಿ ಎತ್ತರದ ಗುಡ್ಡದ ಹೆಸರನ್ನು ಬರೆಯಿರಿ. 

ಉತ್ತರ: ಹಾಲು ರಾಮೇಶ್ವರ ಗುಡ್ಡ.

3) ಬೆಂಗಳೂರು ವಿಭಾಗದಲ್ಲಿರುವ 2 ಪಕ್ಷಿಧಾಮಗಳ ಹೆಸರನ್ನು ತಿಳಿಸಿ. ಉತ್ತರ: ಗುಡವಿ ಪಕ್ಷಿಧಾಮ- ಶಿವಮೊಗ್ಗ ಜಿಲ್ಲೆ. ಮಂಡಗದ್ದೆ ಪಕ್ಷಿಧಾಮ- ಶಿವಮೊಗ್ಗ ಜಿಲ್ಲೆ.

4) ರಾಮನಗರ ಜಿಲ್ಲೆಯಲ್ಲಿರುವ ಪಕ್ಷಿಧಾಮದಲ್ಲಿ ಯಾವ ಪಕ್ಷಿಯನ್ನು ರಕ್ಷಿಸಲಾಗುತ್ತಿದೆ?

 ಉತ್ತರ: ರಣಹದ್ದು.

****************************
ತರಗತಿ 6. ಸಮಾಜ ವಿಜ್ಞಾನ. 

ಪಾಠ 2. ನಮ್ಮ ಕರ್ನಾಟಕ. 

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ 

1) ಬೆಂಗಳೂರು ವಿಭಾಗದಲ್ಲಿನ ಪ್ರಮುಖ ಆಹಾರ ಬೆಳೆಗಳು ಯಾವುದು? 

ಉತ್ತರ: ರಾಗಿ, ಮೆಕ್ಕೆಜೋಳ, ಭತ್ತ, ಕಡಲೆಕಾಯಿ, ಬೆಳೆಕಾಳು ಮುಂತಾದವು.

2) ಹಿಪ್ಪುನೇರಳೆ ಎಲೆಯು ಯಾವ ಉದ್ದಿಮೆಗೆ ಕಚ್ಚಾ ಸಾಮಾಗ್ರಿಯಾಗಿದೆ? 

ಉತ್ತರ: ರೇಷ್ಮೆ.

3) ಭದ್ರಾವತಿಯಲ್ಲಿರುವ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯನ್ನು ಯಾವ ವರ್ಷ ಆರಂಭಿಸಲಾಯಿತು? 

ಉತ್ತರ: 1923.

4) ಬೆಂಗಳೂರು ವಿಭಾಗದಲ್ಲಿ ಯಾವ ಸ್ಥಳಗಳಲ್ಲಿ ಸಿದ್ಧ ಉಡುಪು ಪಾರ್ಕುಗಳನ್ನು ಸ್ಥಾಪಿಸಲಾಗಿದೆ? 

ಉತ್ತರ: ದೊಡ್ಡಬಳ್ಳಾಪುರ, ಆನೇಕಲ್. 

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1) ಜ್ಞಾನಪೀಠ ಪ್ರಶಸ್ತಿ ಪಡೆದ ಬೆಂಗಳೂರು ವಿಭಾಗಕ್ಕೆ ಸೇರಿದ ಮೂವರು ಸಾಹಿತಿಗಳ ಹೆಸರುಗಳನ್ನು ಬರೆಯಿರಿ. 

ಉತ್ತರ: ರಾಷ್ಟ್ರಕವಿ ಕುವೆಂಪು, ಮಾಸ್ತಿ ವೆಂಕಟೇಶ್ ಐಯಂಗಾರ್ ಮತ್ತು ಡಾ. ಯು. ಆರ್. ಅನಂತಮೂರ್ತಿ.

2) ಪ್ರಸಿದ್ಧ ಜಾನಪದ ಮ್ಯೂಸಿಯಂ ಜಾನಪದ ಲೋಕವನ್ನು ಸ್ಥಾಪಿಸಿದವರು? 

ಉತ್ತರ: ಎಚ್. ಎಲ್. ನಾಗೇಗೌಡ.

3) ಬೆಂಗಳೂರು ನಗರದಲ್ಲಿ ಪ್ರತಿವರ್ಷ ನಡೆಯುವ ಪ್ರಸಿದ್ಧ ಉಸ್ತವ ಯಾವುದು? 

ಉತ್ತರ: ಕರಗ ಉಸ್ತವ.. 

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1) ಶಿವಮೊಗ್ಗ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿದ್ದ ರೋಗದ ಹೆಸರೇನು? 

ಉತ್ತರ: ಮಂಗನ ಕಾಯಿಲೆ.

2) ಭಾರತರತ್ನ ಪ್ರಶಸ್ತಿ ಪಡೆದ ಬೆಂಗಳೂರು ವಿಭಾಗದ ಇಬ್ಬರ ಹೆಸರನ್ನು ಬರೆಯಿರಿ. 

ಉತ್ತರ: ಸರ್. ಎಂ. ವಿಶ್ವೇಶ್ವರಯ್ಯ ಮತ್ತು ಸಿ. ವಿ. ಆರ್. ರಾವ್.

3) ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರ ಸ್ಥಾಪಿಸುವ ಆಸ್ಪತ್ರೆ ಕೇಂದ್ರಗಳನ್ನು ಏನೆಂದು ಕರೆಯಲಾಗುತ್ತದೆ? 

ಉತ್ತರ: ಪ್ರಾಥಮಿಕ ಆರೋಗ್ಯ ಕೇಂದ್ರ. 

ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1) ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯ ಹೆಸರನ್ನು ಬರೆಯಿರಿ. 

ಉತ್ತರ: ಕೆ. ಸಿ. ರೆಡ್ಡಿ.

2) ಇಬ್ಬರು ಕರ್ನಾಟಕ ಏಕೀಕರಣದ ರೂವಾರಿಗಳ ಹೆಸರನ್ನು ಬರೆಯಿರಿ. 

ಉತ್ತರ: ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ. 

ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ.

1) ಬೆಂಗಳೂರು ವಿಭಾಗದಲ್ಲಿ ಎಷ್ಟು ಜಿಲ್ಲೆಗಳಿವೆ? ಉತ್ತರ: 9   

2) ದಕ್ಷಿಣ ಭಾರತದ ಅತಿ ದೊಡ್ಡ ಕೆರೆ ಶಾಂತಿ ಸಾಗರ ಯಾವ ಜಿಲ್ಲೆಯಲ್ಲಿದೆ? 

ಉತ್ತರ: ದಾವಣಗೆರೆ ಜಿಲ್ಲೆ.

3) ಬೆಂಗಳೂರು ವಿಭಾಗದಲ್ಲಿ ಅತಿ ಹೆಚ್ಚು ಕಾಡು ಇರುವ ಜಿಲ್ಲೆ ಯಾವುದು? 

ಉತ್ತರ: ಶಿವಮೊಗ್ಗ ಜಿಲ್ಲೆ.

4) ರಾಷ್ಟ್ರಕವಿ ಕುವೆಂಪು ಹೆಸರಿನ ವಿಶ್ವವಿದ್ಯಾಲಯ ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿದೆ? 

ಉತ್ತರ: ಶಿವಮೊಗ್ಗ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು

Random Posts

Random Posts