***ಗುಣ ಸಂಧಿ***
ಅರ್ಥ :-
'ಅ' ಅಥವಾ 'ಆ' ಎಂಬ ಸ್ವರಗಳಿಗೆ 'ಇ' ಅಥವಾ 'ಈ' ಎಂಬ ಸ್ವರ ಸೇರಿದಾಗ 'ಏ' ಕಾರವೂ, 'ಉ' ಅಥವಾ 'ಊ' ಸ್ವರ ಸೇರಿದಾಗ 'ಓ' ಕಾರವೂ 'ಋ' ಎಂಬ ಸ್ವರವು ಸೇರಿದಾಗ 'ಅರ್' ಕಾರವೂ ಆದೇಶವಾಗಿ ಬರುವುದನ್ನು ಗುಣ ಸಂಧಿ ಎಂದು ಕರೆಯುತ್ತೇವೆ
ಉದಾಹರಣೆಗಳು :
(ಪೂರ್ವಪದ + ಉತ್ತರ ಪದ = ಸಂಧಿ ಪದ )
೧) ದೇವ + ಇಂದ್ರ = ದೇವೇಂದ್ರ
೨) ಮಹಾ + ಈಶ ಮಹೇಶ
೩) ಅರುಣ + ಉದಯ = ಅರುಣೋದಯ
೪) ಮಹಾ + ಋಷಿ = ಮಹರ್ಷಿ
೫) ಸುರ + ಇಂದ್ರ = ಸುರೇಂದ್ರ
೬) ಧರಾ + ಇಂದ್ರ = ಧರೇಂದ್ರ
೭) ಧರಾ + ಇಂದ್ರ = ಧರೇಂದ್ರ
೮) ಮಹಾ + ಈಶ್ವರ = ಮಹೇಶ್ವರ
೯) ದೇವ + ಋಷಿ = ದೇವರ್ಷಿ
೧೦)ಚಂದ್ರ+ಉದಯ=ಚಂದ್ರೋದಯ
೧೧) ರಮಾ + ಈಶ = ರಮೇಶ
೧೨) ಜನ್ಮ + ಉತ್ಸವ = ಜನ್ಮೋತ್ಸವ
೧೩)ಮಹಾ + ಉತ್ಸವ = ಮಹೋತ್ಸವ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ