ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld ಎಂದು search ಮಾಡಿ

SATS

SATS-STUDENT ACHIEVEMENT TRACKING SYSTEM

ಬುಧವಾರ, ಅಕ್ಟೋಬರ್ 6, 2021

Class / 6 th / ಸಮಾಜ - ಅಧ್ಯಾಯ 3 - ಪ್ರಶ್ನೋತ್ತರಗಳು

 6 ನ ತರಗತಿ  

ಪಾಠ 3. ಆರಂಭಿಕ ಸಮಾಜ. 


ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿ.

1) ಅಕ್ಷರಗಳ ಪರಿಚಯವಿಲ್ಲದ ಕಾಲ ಘಟ್ಟವನ್ನು------- ಕಾಲ ಎನ್ನುತ್ತಾರೆ. 

ಉತ್ತರ: ಪ್ರಾಗೈತಿಹಾಸಿಕ ಕಾಲ.


2) ಸೂಕ್ಷ್ಮ ಶಿಲಾಯುಗ ವನ್ನು----- ಶಿಲಾಯುಗ ವೆಂದು ಕರೆಯಲಾಗುವುದು.

ಉತ್ತರ: ಮಧ್ಯ.


3) ಭಾರತ ಉಪ ಖಂಡದಲ್ಲಿ ಕೃಷಿಯ ಆರಂಭಿಕ ಕುರುಹುಗಳು------- ನೆಲೆಯಲ್ಲಿ ಕಂಡುಬಂದಿದೆ. 

ಉತ್ತರ: ಪಾಕಿಸ್ತಾನದ ಮೆಹರ್ ಗರ. 


ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.


1) ಇತಿಹಾಸದ 3 ಪ್ರಧಾನ ಕಾಲಗಳು ಯಾವವು? 

ಉತ್ತರ: ಪ್ರಾಗೈತಿಹಾಸ ಕಾಲ, ಪೂರ್ವಭಾವಿ ಇತಿಹಾಸ ಕಾಲ, ಇತಿಹಾಸ ಕಾಲ.


2) ಭೂಮಿಯು ಯಾವಾಗ ಹುಟ್ಟಿತು? 

ಉತ್ತರ: ಭೂಮಿಯು4600 ದಶಲಕ್ಷ ವರ್ಷಗಳ ಹಿಂದೆ ಹುಟ್ಟಿತು.


3) ಹಳೆಯ ಶಿಲಾಯುಗದ ಮಾನವರ ಉಪಕರಣಗಳನ್ನು ಹೆಸರಿಸಿ. 

ಉತ್ತರ: ಹೆರೆಚಕ್ಕೆ, ಚಾಕು, ಕಲ್ಲಳ್ಳಿ, ಮೋನ ಮುಂತಾದ ದೊಡ್ಡ ದೊಡ್ಡ ಶೀಲಾ ಉಪಕರಣಗಳನ್ನು ಬೆಣಚುಕಲ್ಲು ಗಳಿಂದ ತಯಾರಿಸಿಕೊಳ್ಳುತ್ತಿದ್ದರು.


4) ಮಧ್ಯ ಶಿಲಾಯುಗ ವನ್ನು ಏಕೆ ಸೂಕ್ಷ್ಮ ಯುಗ ಎಂದ ಕರೆಯುತ್ತಾರೆ? 


ಉತ್ತರ: ಈ ಕಾಲದ ಮಾನವರು ದೊಡ್ಡದೊಡ್ಡ ಶೀಲಾ ಉಪಕರಣಗಳ ಬದಲು ಕೌಶಲ್ಯ ಬರೀತಾ ಕಿರು ಶಿಲಾಯುಧಗಳು ಬಳಸಲಾರಂಭಿಸಿದರು ಆದ್ದರಿಂದ ಈ ಕಾಲವನ್ನು ಸೂಕ್ಷ್ಮ ಶಿಲಾಯುಗ ಎಂದು ಕರೆಯಲಾಗುವುದು.


5) ಯಾವ ಯುಗದಲ್ಲಿ ಮಾನವರು ಕೃಷಿ ಆರಂಭಿಸಿದರು? 

ಉತ್ತರ: ನವ ಶಿಲಾಯುಗ.


6) ಮಾನವರು ಬಳಸಿದ ಮೊದಲ ಲೋಹ ಯಾವುದು? 

ಉತ್ತರ: ತಾಮ್ರ.


7) ಬೃಹತ್ ಶಿಲಾಯುಗದ ಸಮಾಧಿಗಳನ್ನು ಜನಸಾಮಾನ್ಯರು ಏನೆಂದು ಕರೆಯುತ್ತಾರೆ? 

ಉತ್ತರ: ಪಾಂಡವರ ಗುಡಿ ಅಥವಾ ಮನೆ, ಮೌರ್ಯರ ಕಲ್ಲು ಎಂದು ಕರೆಯುತ್ತಾರೆ.


8) ಕರ್ನಾಟಕದಲ್ಲಿರುವ ಪ್ರಮುಖ ಬೃಹತ್ ಶಿಲಾಯುಗದ ನೆಲೆಗಳನ್ನು ಹೆಸರಿಸಿ. 

ಉತ್ತರ: ಬನಹಳ್ಳಿ, ಹಿರೇಬೆನಕಲ್ ಲು, ಬ್ರಹ್ಮಗಿರಿ, ಕೊಪ್ಪ, ಹೆಗ್ಗಡೆಹಳ್ಳಿ, ಟಿ ನರಸೀಪುರ, ಹೆಮ್ಮಿಗೆ, ಹಳ್ಳೂರು, ಜಡಿಗೇನಹಳ್ಳಿ, ಸಾವನದುರ್ಗ, ಪಾಂಡವರ ದಿನ್ನಿ ಮೊದಲಾದವು.


 ಗುಂಪಿನಲ್ಲಿ ಚರ್ಚಿಸಿ ಉತ್ತರಿಸಿ.


1) ನವಶಿಲಾಯುಗದಲ್ಲಿ ಕೃಷಿಯ ಉಗಮಕ್ಕೆ ಕಾರಣವಾದ ಅಂಶಗಳು ಯಾವವು? 

ಉತ್ತರ: ಜನರು ಆಹಾರಕ್ಕಾಗಿ ಅಲೆಯುವುದನ್ನು ಬಿಟ್ಟು ನವಶಿಲಾಯುಗದಲ್ಲಿ ಆಹಾರ ಉತ್ಪಾದನೆಗೆ ಮುಂದಾದರೂ. ನದಿ ತೀರಗಳಲ್ಲಿ ಫಲವತ್ತಾದ ಮೆಕ್ಕಲು ಮಣ್ಣಿನಲ್ಲಿ ಕೃಷಿಯನ್ನು ಆರಂಭಿಸಿದರು.


2) ಕಬ್ಬಿಣದ ಪರಿಚಯದಿಂದ ಕಬ್ಬಿಣ ಯುಗದಲ್ಲಿ ಉಂಟಾದ ಬದಲಾವಣೆಗಳೇನು? 

ಉತ್ತರ: ಕಬ್ಬಿಣ ಅತ್ಯಂತ ಗಡುಸಾದ ಲೋಹ. ಇದು ದಕ್ಷಿಣ ಭಾರತದಲ್ಲಿ ತಾಮ್ರ ಕು ಮೊದಲೇ ಬಳಕೆಯಲ್ಲಿತ್ತು. ಕಾಲವನ್ನು ಬೃಹತ್ ಶೀಲಾ ಸಂಸ್ಕೃತಿಯ ಕಾಲವೆಂದು ಕರೆಯುತ್ತಾರೆ. ಕಬ್ಬಿಣದ ಆಯುಧ ಮತ್ತು ಸಲಕರಣೆಗಳು ಕೃಷಿ ಹಾಗೂ ಕರಕುಶಲ ಉತ್ಪಾದನೆಯಲ್ಲಿ ನೆರವಾದವು. ಉತ್ತರ ಭಾರತದಲ್ಲಿ ಕಬ್ಬಿಣದ ಬಳಕೆ ತೀವ್ರ ಗೊಂಡಂತೆ ಕೃಷಿ ಚಟುವಟಿಕೆಗಳು ಗರಿಗೆದರಿತು. ಇದರಿಂದ ಹೆಚ್ಚುವರಿ ಉತ್ಪಾದನೆ ಉಂಟಾಗಿತ್ತು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ