ತರಗತಿ 7.
ವಿಷಯ: ಸಮಾಜ ವಿಜ್ಞಾನ.
ಪಾಠ 3. ಭಕ್ತಿ ಪಂಥ ಹಾಗೂ ಸೂಪಿ ಪರಂಪರೆ.
ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿ.
1) ಅಕ್ಕಮಹಾದೇವಿಯವರ ವಚನದ ಅಂಕಿತನಾಮ-----
ಉತ್ತರ: ಚೆನ್ನಮಲ್ಲಿಕಾರ್ಜುನ.
2) ಪುರಂದರದಾಸರು------- ಆಸ್ಥಾನದಲ್ಲಿ ಇದ್ದರೂ.
ಉತ್ತರ: ಕೃಷ್ಣದೇವರಾಯ.
3) ಆದಿಕೇಶವ ಎಂಬುದು------ಅಂಕಿತನಾಮ.
ಉತ್ತರ: ಕನಕದಾಸರು.
4) ಕರ್ನಾಟಕದ ಕಬೀರ ಎಂದು------- ಅವರನ್ನು ಕರೆಯುತ್ತಾರೆ.
ಉತ್ತರ: ಶಿಶುನಾಳ ಶರೀಫ್.
5) ಚೈತನ್ಯರ ಮೊದಲ ಹೆಸರು-----
ಉತ್ತರ: ವಿಶ್ವಂಭರ.
6) ಸೂಫಿ ಸಂತ ಕ್ವಾಜಾ ಬಂದೇನವಾಜ ರಿದ್ದ ಇನ್ನೊಂದು ಹೆಸರು-----
ಉತ್ತರ: ಗೆಸುದರಾಜ್.
ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1) ಆಂಡಾಳ್ ಅರ ಮೂಲ ಹೆಸರೇನು?
ಉತ್ತರ: ಗೋದಾದೇವಿ.
2) ಅಕ್ಕಮಹಾದೇವಿ ಎಲ್ಲಿ ಜನಿಸಿದರು?
ಉತ್ತರ: ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ ಅಕ್ಕಮಹಾದೇವಿ ಜನಿಸಿದರು.
3) ಕರ್ನಾಟಕ ಸಂಗೀತದ ಪಿತಾಮಹ ಯಾರು?
ಉತ್ತರ ಪುರಂದರದಾಸರು.
4) ಕನಕದಾಸರ ತಂದೆ- ತಾಯಿಗಳನ್ನು ಹೆಸರಿಸಿರಿ.
ಉತ್ತರ: ತಂದೆ- ಬೀರಪ್ಪ, ತಾಯಿ- ಬಚ್ಚಮ್ಮ.
5) ಕನ್ನಡದ ಮೊದಲ ಮುಸ್ಲಿಂ ಕವಿ ಯಾರು?
ಉತ್ತರ: ಶಿಶುನಾಳ ಶರೀಫ್.
6) ಸಿಕ್ಕರ ಪವಿತ್ರ ಗ್ರಂಥ ಯಾವುದು?
ಉತ್ತರ: “ಗ್ರಂಥ ಸಾಹೇಬ”
7) ಕಲಿಯುಗದ ರಾಧಾ ಎಂದು ಯಾರನ್ನು ಕರೆಯುತ್ತಿದ್ದರು?
ಉತ್ತರ: ಮೀರಾಬಾಯಿ.
8) ಸೂಫಿ ಪದದ ಅರ್ಥವೇನು?
ಉತ್ತರ: ಸೂಫಿ ಎಂಬ ಪದವು 'ಸಾ ಪ್' ಎಂಬ ಪದದಿಂದ ಬಂದಿದೆ. ಸಾ ಪ್ ಎಂದರೆ ಶುದ್ಧಿ ಅಥವಾ ಸುಚಿ ಎಂದು ಅರ್ಥ ಬರುತ್ತದೆ.
9) ಭಾರತದ ಸೂಫಿ ಸಂತರು ಯಾರ್ಯಾರು?
ಉತ್ತರ: ನಿಜಾಮುದ್ದೀನ್ ಹೌಲಿಯ, ಕ್ವಾಜಾ ಬಂದೇನವಾಜ್.
10) ಚಿಸ್ತಿ ಪಂಗಡದ ಸ್ಥಾಪಕ ಯಾರು?
ಉತ್ತರ: ಮೋಹಿನಿ ದಿನ ಚಿಸ್ತಿ.
2 ಅಥವಾ 3 ವಾಕ್ಯಗಳಲ್ಲಿ ಉತ್ತರಿಸಿ.
1) ಕಬೀರದಾಸರು ನೀಡಿದ ಸಂದೇಶಗಳನ್ನು ತಿಳಿಸಿ.
ಉತ್ತರ: ಕಬೀರರು ತಾನು ರಾಮ ಮತ್ತು ಅಲ್ಲಾನ ಮಗನೆಂದು ಸಾರಿದರು. ದೇಹ ದಂಡನೆ, ಉಪವಾಸ, ತೀರ್ಥಯಾತ್ರೆ, ಪವಿತ್ರ ಸ್ಥಾನದಿಂದ ದೇವರನ್ನು ಕಾಣಲು ಸಾಧ್ಯವಿಲ್ಲ. ಆದರೆ ಪವಿತ್ರವಾದ ಭಕ್ತಿಮಾರ್ಗದಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ಹೇಳಿದರು.
2) ಗುರು ನಾನಕರ ಬೋಧನೆಗಳು?
ಉತ್ತರ: ವಿಶ್ವಕ್ಕೆ ದೇವರು ಒಬ್ಬನೇ, ಅವನು ಸತ್ಯ ನಿತ್ಯ ನೆಂದು ಸಾರಿದರು. ಜೀವನದಲ್ಲಿ ಮೋಸ, ವಂಚನೆ, ಕಳ್ಳತನ, ಹಿಂಸೆ ಮಾಡಬಾರದು, ಗುರುವಿನಿಂದ ಭಕ್ತಿಯನ್ನು, ಭಕ್ತಿಯಿಂದ ಮುಕ್ತಿಯನ್ನು ಪಡೆಯಬಹುದು ಎಂದು ಹೇಳಿದರು. ಸಾಮಾಜಿಕ ಅನಿಷ್ಟ ಗಳಾದ ಮೂರ್ತಿಪೂಜೆ, ಜಾತಿ ಪದ್ಧತಿ, ಸತಿ ಪದ್ಧತಿ ಮುಂತಾದವುಗಳನ್ನು ವಿರೋಧಿಸಿದರು.
3) ಭಕ್ತಿಪಂಥದ ಪರಿಣಾಮಗಳು ಯಾವುವು?
ಉತ್ತರ: ಭಕ್ತಿ ಸಂತರು ಹಿಂದೂ-ಮುಸ್ಲಿಂ ಸಾಮರಸ್ಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಕ್ತಿ ಸಂತರು ಜನರಾಡುವ ಸ್ಥಳೀಯ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದರು. ಇದರಿಂದಾಗಿ ಭಾರತೀಯರ ದೇಶಿ ಭಾಷೆಗಳು ಶ್ರೀಮಂತ ಗೊಂಡವು.
4) ಸೂಪಿ ಪಂಥದ ಸಾರವನ್ನು ಸಂಗ್ರಹಿಸಿ ಬರೆಯಿರಿ.
ಉತ್ತರ:1) ದೇವರು ಒಬ್ಬನೇ, ಆತನು ಶಕ್ತನಾಗಿದ್ದಾನೆ. ನಾವೆಲ್ಲರೂ ಆತನ ಮಕ್ಕಳು ಇಂದು ಪ್ರತಿಪಾದಿಸಿತು.2) ಉತ್ತಮ ಕಾಯಕಕ್ಕೆ ಮಹತ್ವ ನೀಡಿದರು.3) ಎಲ್ಲಾ ಮಾನವರು ಸಮಾನರು ಎಂದು ಸಾರಿತು.4) ಜಾತಿಪದ್ಧತಿಯನ್ನು ವಿರೋಧಿಸಿತು.
ಈ ಕೆಳಗಿನ ಈ ಪಟ್ಟಿಗೆ ಬಂಧಿಸಿದ ದಿ ಪಟ್ಟಿಯಲ್ಲಿನ ವಿಷಯಗಳನ್ನು ಹೊಂದಿಸಿ ಬರೆಯಿರಿ.
1) ಗುರುನಾನಕ್- ಸಿಖ್ ಧರ್ಮ.
2) ಚೈತನ್ಯ- ಹರೇಕೃಷ್ಣ ಪಂಥ
3) ನಿಜಾಮುದ್ದೀನ್ ಅವು ಲಿಯ
4) ಮೀರಾಬಾಯಿ- ಕಲಿಯುಗದ ರಾಧಾ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ