ನೀರು ಕುದಿಯಲು, ಹಾಲು ಉಕ್ಕಲು ಮತ್ತು ಎಣ್ಣೆ ಸಿಡಿಯಲು ಕಾರಣವೇನು?
ಉತ್ತರ: -
ಭೂಮಿಯ ಮೇಲೆ ಇರುವ ವಸ್ತುಗಳು ಬಹಳ ವಿಚಿತ್ರವಾದ ಗುಣಗಳನ್ನು ಹೊಂದಿವೆ.
ನೀರಿಗೆ ಶಾಖ ಕೊಟ್ಟಾಗ, ಹೆಚ್ಚಾದ ಶಾಖ ಹೊರ ಹೋಗಲು ನೀರಿನ ಕಣಗಳನ್ನು ಮೇಲ್ಮುಖವಾಗಿ ಚಲಿಸುವಂತೆ ಮಾಡುತ್ತದೆ.ನೀರುಕುದಿಯುತ್ತಾ ಬಿಸಿ ಹೊರ ಹೋಗುತ್ತದೆ.
ಹಾಲಿನಲ್ಲಿ ನೀರು ಇರುವುದರಿಂದ ಹೆಚ್ಚಾದ
ಶಾಖ ಹೊರಹೋಗುವಾಗ ಹಾಲಿನಕೆನೆ ಮೇಲ್ಭಾಗದಲ್ಲಿ ಬಂದು, ಶಾಖ ನೀರಿನ ಮೂಲಕ ಹೊರ ಹೋಗದಂತೆ ತಡೆಯುತ್ತದೆ. ಒತ್ತಡ ಹೆಚ್ಚಾದಾಗ, ಕೆನೆ ಪಕ್ಕಕ್ಕೆ ಸರಿದು ಹಾಲು ಉಕ್ಕುತ್ತದೆ. ಶಾಖ ಹೊರ ಹೋಗುತ್ತದೆ.
ಎಣ್ಣೆ- ಇದರಲ್ಲಿ ನೀರಿಲ್ಲ. ಹಾಗಾಗಿ ಶಾಖವರ್ಗಾವಣೆ ಆಗದೆ, ಒಳಗೆ ಉಳಿದುಕೊಂಡು ಗುಪ್ತವಾಗಿರುತ್ತದೆ. ಅದಕ್ಕಾಗಿ ಕಾಯ್ದಎಣ್ಣೆಯಲ್ಲಿ ಚಿಕ್ಕ ವಸ್ತು ಬಿದ್ದಾಗ ಶಾಖ ಅದರ ಮೂಲಕ ಹೊರ ಬರುವಾಗ ಜೋರಾಗಿ ಸಿಡಿಯುತ್ತದೆ. ಈ ಕ್ರಿಯೆಗಳು ನಡೆಯಲು ಕಾರಣ ಶಾಖದ ಹೊರ ಹಾಕುವಿಕೆ ಅಷ್ಟೇ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ