ವೈಜ್ಞಾನಿಕ ಕಾರಣ
ಹುಲಿ ಹುಲ್ಲು ತಿಂದರೆ, ಬದುಕುವುದಿಲ್ಲವೇ?
👉 ಸಸ್ಯಹಾರಿ ತಿನ್ನುವ ಆಹಾರ 3 ಹಂತದಲ್ಲಿ ಶಕ್ತಿಯಾಗಿ ಬದಲಾಗುತ್ತದೆ. ಸಸ್ಯಗಳಿಂದ ಬಹುಶರ್ಕರ(ಪಿಷ್ಟ), ಜೀವಿಗಳಲ್ಲಿ ದ್ವಿಶರ್ಕರ, ಏಕಶರ್ಕರ(ಗ್ಲುಕೋಸ್),ಕೊನೆಗೆ ಎಟಿಪಿ ಶಕ್ತಿಯಾಗಿ ಬದಲಾಗುತ್ತವೆ. ವಿಶೇಷ ಹಲ್ಲು & ಕರುಳ ರಚನೆ ಹೊಂದಿವೆ. ಜೀರ್ಣಕ್ರಿಯೆ ಹೆಚ್ಚುಸಮಯ ಹಿಡಿಯುತ್ತದೆ. ಆದರೆ ಮಾಂಸಾಹಾರಿ 2 ಹಂತದಲ್ಲಿ ಶಕ್ತಿ ಪಡೆಯುತ್ತವೆ. ದ್ವಿಶರ್ಕರ (ಮಾಂಸ), ಏಕಶರ್ಕರ, ಎಟಿಪಿ ಶಕ್ತಿಯಾಗಿ ಬದಲಾಗುತ್ತದೆ. ಚೂಪಾದ ಕೋರೆಹಲ್ಲು& ಚಿಕ್ಕ ಕರುಳು ಹೊಂದಿರುತ್ತವೆ. ದವಡೆಹಲ್ಲು ಇರುವುದಿಲ್ಲ. ಹೀಗಾಗಿ ಮಾಂಸಾಹಾರಿ ಸಸ್ಯ ತಿಂದು ಜೀರ್ಣಿಸುವ ಶಕ್ತಿ ಇರುವುದಿಲ್ಲ. ಆದ್ದರಿಂದ ಶುದ್ಧಮಾಂಸಾಹಾರಿಗಳು, ಸಸ್ಯ ಸೇವಿಸುವುದಿಲ್ಲ. ಜೀರ್ಣಕ್ರಿಯೆ ಕಡಿಮೆ ಅವಧಿಯಲ್ಲಿ ಮುಗಿಯುವುದರಿಂದ ಮಾಂಸಾಹಾರಿ ಕಡಿಮೆ ನೀರು ಕುಡಿಯುತ್ತವೆ. ಸಸ್ಯಹಾರಿ ಮಾಂಸ ಸೇವಿಸಬಹುದು,ಆದರೆ ಮಾಂಸಾಹಾರಿ ಸಸ್ಯಸೇವಿಸಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ