ಸವರ್ಣದೀರ್ಘ ಸಂಧಿ :-
( ಅ ಮತ್ತು ಆ, ಇ ಮತ್ತು ಈ, ಉ ಮತ್ತು ಊ - ಇವುಗಳಿಗೆ 'ಸವರ್ಣ'ಗಳೆಂದು ಹೆಸರು. ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು.)
ಅರ್ಥ :-
ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿದರೆ ಅದನ್ನು ಸವರ್ಣದೀರ್ಘ ಸಂಧಿ ಎನ್ನುವರು.
ಸವರ್ಣದೀರ್ಘ ಸಂಧಿಗೆ ಉದಾಹರಣೆಗಳು :-
( ಅ+ಅ = ಆ
ಇ + ಇ = ಈ
ಉ + ಉ =ಊ )
ಜಲಜ + ಅಕ್ಷಿ = ಜಲಜಾಕ್ಷಿ
ಲಕ್ಷೀ + ಈಶ = ಲಕ್ಷ್ಮೀಶ
ದೇವ + ಅಸುರ = ದೇವಾಸುರ
ರವಿ + ಇಂದ್ರ = ರವೀಂದ್ರ
ಸುರ + ಅಸುರ = ಸುರಾಸುರ
ಕವಿ + ಇಂದ್ರ = ಕವೀಂದ್ರ
ಗಿರಿ + ಈಶ = ಗಿರೀಶ
ಮಹಾ + ಆತ್ಮ = ಮಹಾತ್ಮ
ಗುರು + ಉಪದೇಶ = ಗುರೂಪದೇಶ
ವಿದ್ಯಾ + ಅಭ್ಯಾಸ = ವಿದ್ಯಾಭ್ಯಾಸ
ಶುಭ + ಆಶಯ = ಶುಭಾಶಯ
ಭೂಮಿ + ಈಶ್ವರ = ಭೂಮೀಶ್ವರ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ