ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld ಎಂದು search ಮಾಡಿ

SATS

SATS-STUDENT ACHIEVEMENT TRACKING SYSTEM

ಸೋಮವಾರ, ಜನವರಿ 15, 2024

Class / B1 / kannada / ನುಡಿಗಟ್ಟುಗಳು | vktworld

 


ಅ - ಅಃ


ಅಡ್ಡದಾರಿ ಹಿಡಿ = ತಪ್ಪು ಕೆಲಸ ಮಾಡು

ಎತ್ತಿದ ಕೈ = ಪ್ರವೀಣ


ಕ - ಙ


ಕಿಡಿಕಾರು ( ಸಿಟ್ಟಿಗೇಳು )

ಗಾಳಿಗೆ ತೂರಿಬಿಡು - ನಿರ್ಲಕ್ಷಿಸಿ


ಚ - ಞ

ಚಕಾರವೆತ್ತು - ಆಕ್ಷೇಪಣೆ ಎತ್ತು

ಜನ್ಮ ಜಾಲಾಡು - ಚೆನ್ನಾಗಿ ಬೈಯು


ಟ - ಣ

ಟೋಪಿ ಹಾಕು - ಮೋಸ ಮಾಡು

ಡಂಗುರ ಹೊಡೆ - ಘೋಷಣೆ ಮಾಡು


ತ - ನ

ತಲೆ ತಿನ್ನು - ಕಾಟ ಕೊಡು

ತಲೆ ತೂಗು ( ಒಪ್ಪು )

ನೀರಿಗೆ ಹಾಕು ( ವ್ಯರ್ಥ ಮಾಡು )


ಪ - ಮ


ಬಾಲ ಕತ್ತರಿಸು - ಸೊಕ್ಕು ಮುರಿ

ಬೇರೂರು  (ಸ್ಥಿರವಾಗಿರು )

ಮೈಬಗ್ಗಿಸು  (ಶ್ರಮ ಪಡು )

ಮುಖ ಅರಳು ( ಸಂತೋಷವಾಗು) 


ಯ - ಜ್ಞ


ರೈಲು ಬಿಡು - ಸುಳ್ಳು ಹೇಳು




Class | B17 | ಸಂಸ್ಕೃತ ಸ್ವರ ಸಂಧಿಗಳು | ಗುಣ ಸಂಧಿ | sandhigalu | guna sandhi | vktworld


***ಗುಣ ಸಂಧಿ***

ಅರ್ಥ :- 

'ಅ' ಅಥವಾ 'ಆ' ಎಂಬ ಸ್ವರಗಳಿಗೆ 'ಇ' ಅಥವಾ 'ಈ' ಎಂಬ ಸ್ವರ ಸೇರಿದಾಗ 'ಏ' ಕಾರವೂ,  'ಉ' ಅಥವಾ 'ಊ' ಸ್ವರ ಸೇರಿದಾಗ 'ಓ' ಕಾರವೂ 'ಋ' ಎಂಬ ಸ್ವರವು ಸೇರಿದಾಗ 'ಅರ್' ಕಾರವೂ ಆದೇಶವಾಗಿ ಬರುವುದನ್ನು ಗುಣ ಸಂಧಿ ಎಂದು ಕರೆಯುತ್ತೇವೆ



ಉದಾಹರಣೆಗಳು : 


(ಪೂರ್ವಪದ + ಉತ್ತರ ಪದ = ಸಂಧಿ ಪದ )

 

೧) ದೇವ + ಇಂದ್ರ = ದೇವೇಂದ್ರ

೨) ಮಹಾ + ಈಶ ಮಹೇಶ

೩) ಅರುಣ + ಉದಯ = ಅರುಣೋದಯ 

೪) ಮಹಾ + ಋಷಿ = ಮಹರ್ಷಿ

೫) ಸುರ + ಇಂದ್ರ = ಸುರೇಂದ್ರ

೬) ಧರಾ + ಇಂದ್ರ = ಧರೇಂದ್ರ

೭) ಧರಾ + ಇಂದ್ರ = ಧರೇಂದ್ರ

೮) ಮಹಾ + ಈಶ್ವರ = ಮಹೇಶ್ವರ

೯) ದೇವ + ಋಷಿ = ದೇವರ್ಷಿ

೧೦)ಚಂದ್ರ+ಉದಯ=ಚಂದ್ರೋದಯ

೧೧) ರಮಾ + ಈಶ = ರಮೇಶ

೧೨) ಜನ್ಮ + ಉತ್ಸವ = ಜನ್ಮೋತ್ಸವ


೧೩)ಮಹಾ + ಉತ್ಸವ = ಮಹೋತ್ಸವ